ಪುಷ್ಪ ಸಿನಿಮಾ ನೋಡಿ ಕೊಲೆಗೆ ಪ್ರೇರಣೆ. ಅಪ್ರಾಪ್ತ ಮಕ್ಕಳಿಂದ 24 ವರ್ಷದ ಯುವಕನ ಕೊಲೆ
ಪುಷ್ಪ ಸಿನೆಮಾದ ಪ್ರಚೋದನೆಗೊಳಗಾಗಿ 3 ಮಕ್ಕಳು ಯುವಕನನ್ನು ಚಾಕುವಿನಿಂದ ಇರಿದು ಕೊಲೆ ನಡೆಸಿ ದ್ರಶ್ಯವನ್ನು ವಿಡಿಯೋ ಶೂಟ್ ಮಾಡಲಾಯಿತು
ಪುಷ್ಪದಂತಹ ಸಿನೆಮಾದ ಪ್ರೇರಣೆಯಿಂದ ಪ್ರಚೋದನೆಗೊಳಗಾಗಿ 3 ಅಪ್ರಾಪ್ತ ವಯಸ್ಸಿನ ಮಕ್ಕಳು 24 ವರ್ಷದ ಯುವಕನನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ. ಪೊಲೀಸರ ಪ್ರಕಾರ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲು ಅವರು ಇದನ್ನು ಮಾಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಜಹಾಂಗೀರ್ ಪುರಿಯಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಯುವಕನನ್ನು 3 ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿ ಚಾಕುವಿನಿಂದ ಇರಿದು ಕೊಲೆ ನಡೆಸಲಾಗಿದೆ. ಪೊಲೀಸರ ಪ್ರಕಾರ ಅವರಿಗೆ ತೆಲುಗು ಚಿತ್ರ ಪುಷ್ಪ ಸಿನೆಮಾವನ್ನು ನೋಡುವ ಮೂಲಕ ಅವರಿಗೆ ಕೊಲೆ ಮಾಡಲು ಪ್ರೇರಣೆ ಸಿಕ್ಕಿದೆ.ಮತ್ತು ಕೊಲೆಯ ವಿಡಿಯೋ ಚಿತ್ರವನ್ನು ಇನ್ಸ್ರಗ್ರಾಮ್ನಲ್ಲಿ ಹಂಚುವ ಮೂಲಕ ಕುಖ್ಯಾತಿ ಗಳಿಸಲು ಬಯಸಿದ್ದರು ಎಂದು ತಿಳಿಸಿದ್ದಾರೆ.
ಶಿಬು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮೂವರು ಮಕ್ಕಳು ಸೇರಿ ಯುವಕನನ್ನು ಕೊಲೆ ಮಾಡುವುದು ಸಿ ಸಿ ಟಿವಿ ದ್ರಶ್ಯಾವಳಿಯಿಂದ ಬೆಳಕಿಗೆ ಬಂದಿದೆ. ಹದಿ ಹರೆಯದ ಮಕ್ಕಳು ತಮ್ಮನ್ನು ತಾವೇ ಗುರುತಿಸಿಕೊಂಡಿದ್ದು " ಬದ್ನಾಮ್ " ಎಂಬ ಹೆಸರಿನಿಂದಾಗಿದೆ. ಪೊಲೀಸರ ಪ್ರಕಾರ ಅವರು ಪುಷ್ಪಾದ ಮುಖ್ಯ ಪಾತ್ರವನ್ನು ಅನುಕರಿಸಲು ಪ್ರಯತ್ನಿಸಿದರು ಎಂದಾಗಿದೆ. ಪೊಲೀಸರ ಪ್ರಕಾರ ಪುಷ್ಪಾ ಮುಂತಾದ ಸಿನೆಮಾವನ್ನು ನೋಡುವ ಮೂಲಕ ಮಕ್ಕಳು ದರೊಡೆಕೋರರ ಜೀವನ ಶೈಲಿಯಿಂದ ಹೆಚ್ಚು ಪ್ರಬಾವಿತರಾಗಿದ್ದಾರೆ ಎಂದು ತಿಳಿಸಿದರು.



Post a Comment
Post a Comment