Report Abuse

Tags

Categories

Advertisement

Main Ad

Tags

Recent Posts

3/recent/post-list

Recent in Tech

3/Technology/post-list

Facebook

Business

Business/featured
DIGIVLOGS

ತಪ್ಪಾದ ಖಾತೆಗೆ ಹಣ ವರ್ಗಾವಣೆಯಾದರೆ ನಿಮ್ಮ ಹಣವನ್ನು ನೀವು ವಾಪಸ್ ಪಡೆಯಬಹುದಾ?


 ಇಂದಿನ ಕಾಲದಲ್ಲಿ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸರ್ವ ಸಾಮಾನ್ಯ ಪ್ರತಿಕ್ರಿಯೆ ಆಗಿದೆ. ಅಕೌಂಟಿನಲ್ಲಿ ಹಣವಿದ್ದರೆ ಬೇರೆ ಯಾರಿಗಾದರೂ ಹಣ ವರ್ಗಾವಣೆ ಮಾಡಬೇಕಾದರೆ ಬ್ಯಾಂಕಿಗೆ ಹೋಗುವ ಆವಶ್ಯಕತೆ ಇಲ್ಲ ಮನೆಯಲ್ಲೇ ಕೂತು ಅಥವಾ ನೀವು ಎಲ್ಲಿ ಇದ್ದಿರೋ ಅಲ್ಲಿಂದಲೇ ಬೇರೆ ಯಾವ ಬ್ಯಾಂಕ್ ಆದರೂ ಪರವಾಗಿಲ್ಲ ನಿಮಿಷದೊಳಗೆ ನಿಮ್ಮ ಅಕೌಂಟಿನಿಂದ ಬೇರೆಯವರ ಅಕೌಂಟಿಗೆ ಹಣ ವರ್ಗಾವಣೆ ಮಾಡಬಹುದು.ಇದಕ್ಕೆ ಇಂಟರ್ನೆಟ್, ಮೊಬೈಲ್ ಅಥವಾ ಕಂಪ್ಯೂಟರ್ ಇದ್ದರೆ ಸಾಕು.ಆದರೆ, ಈ ಸೌಲಭ್ಯ ಎಷ್ಟೊಂದು ಸುಲಭವಾಗಿದೆಯೂ ಅಷ್ಟೇ ಅವಾಂತರಕ್ಕೆ ಕಾರಣಕಾರಿ ಕೂಡ ಆಗಿದೆ.

ನೀವು ಹಣ ಕಲಿಸುವಾಗ ಅವರ Account ನಂಬರ್, ಬ್ಯಾಂಕ್ ಕೋಡ್ ಅಥವಾ ifsc code ನಲ್ಲಿ ಒಂದು ಸಣ್ಣ ತಪ್ಪು ನಡೆದರೆ ಅಂದರೆ ಒಂದು ನಂಬರ್ ಜಾಸ್ತಿಯಾಗುವುದೋ ಕಮ್ಮಿಯೋ ಆದರೆ ಅಥವಾ ನಂಬರ್ ಬದಲಾದರೆ ನಿಮ್ಮ ಹಣವು ಬೇರೆಯವರ ಅಕೌಂಟಿಗೆ ಹೋಗಬಹುದು  ಅಕೌಂಟ್ ನಂಬರ್ ಉದ್ದುದ್ದವಾಗಿ ನಮ್ಮನ್ನು ಕನ್ಫ್ಯೂಸ್ ಮಾಡುವ ತರಹನೇ ಇರುತ್ತದೆ. ನಂಬರ್ ಫೀಡ್ ಮಾಡುವ ಸಮಯದಲ್ಲಿ ನೀವು ಹೆಚ್ಚು ಕಾಳಜಿ ವಹಿಸಬೇಕು ಮತ್ತು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ನಿಮ್ಮ ವರ್ಗಾವಣೆಯ ಸಂದರ್ಭದಲ್ಲಿ ಅಪ್ಪಿ ತಪ್ಪಿ ಬೇರೆಯವರ ನೀವು ಬಯಸದ ಅಕೌಂಟಿಗೆ ಹೋದರೆ ಆ ಪರಿಸ್ಥಿತಿಯಲ್ಲಿ ನೀವು ಏನು ಮಾಡಬೇಕು  ಮತ್ತು ಆ ಹಣವನ್ನು ಹೇಗೆ ವಾಪಸ್ ಪಡೆಯಬೇಕು ಎಂಬ ಕೆಲವು ಅಂಶಗಳ  ಬಗ್ಗೆ ತಿಳಿಸಿಕೊಡುತ್ತೇನೆ.ಇಲ್ಲಿದೆ ಅದರ ಸಂಪೂರ್ಣವಾದ ಮಾಹಿತಿ 

ನೀವು ನಮೂದಿಸಿರುವ ಅಕೌಂಟ್ ನಂಬರ್ ಅಸ್ತಿತ್ವದಲ್ಲಿ ಇಲ್ಲದಿದ್ದರೆ ನಿಮ್ಮ ಹಣವು ನಿಮ್ಮ ಖಾತೆಗೆ  ಶೀಘ್ರವೇ ವಾಪಸ್ ಬರಬಹುದು ಆದರೆ ಅಕೌಂಟ್ ನಂಬರ್ ತಪ್ಪಾಗಿ ಬೇರೆಯವರ ಖಾತೆಗೆ ಹೋದರೆ ನಿಮ್ಮ ಹಣವನ್ನು ವಾಪಸ್ ಪಡೆಯಲು ನೀವು ಎರಡು ಕೆಲಸಗಳನ್ನು ಮಾಡಬೇಕು. ಮೊದಲನೇಯದಾಗಿ ನೀವು ಈ ಮಾಹಿತಿಯನ್ನು ಮೊದಲು ನಿಮ್ಮ Homebranch ಗೆ ತಿಳಿಸಬೇಕು ನೀವು ನೀಡಿದ ಮಾಹಿತಿಯ ಮೇರೆಗೆ ನಿಮ್ಮ ಬ್ರಾಂಚ್ ಅಧಿಕಾರಿಯು ನಿಮ್ಮ ಹಣವು ಯಾವ ಖಾತೆಗೆ ವರ್ಗಾವಣೆಯಾಗಿದೆಯೋ ಅವರ home branch ಗೆ ಮಾಹಿತಿ ನೀಡುತ್ತಾರೆ ಮತ್ತೆ ವರ್ಗಾವಣೆಯಾದ ಬ್ರಾಂಚ್ ಅಧಿಕಾರಿಯು ಯಾರ ಖಾತೆಗೆ ಹಣ ಸೇರಿದೆಯೋ ಅವರನ್ನು ಸಂಪರ್ಕಿಸಿ ಅವರಲ್ಲಿ ಹಣವನ್ನು ಹಿಂಪಡೆಯಲು ಅನುಮತಿ ಪಡೆಯುತ್ತಾರೆ.

 ಓಂದು ವೇಳೆ ತಪ್ಪಾಗಿ ಪಡೆದ ಹಣವನ್ನು ಹಿಂತಿರುಗಿಸಲು ಆ ಖಾತೆದಾರನು ನಿರಾಕರಿಸಿದರೆ ನೀವು ನಿಮ್ಮ ಹಣವನ್ನು ಹಿಂಪಡೆಯಲು ಕಾನೂನಿನ ಸಹಾಯವನ್ನು ಪಡೆಯಬಹುದು.ಮತ್ತು ಆತನ ವಿರುದ್ಧ RBI ನಿಯಮ  ಉಲ್ಲಂಘನೆ ಆದಾರದಲ್ಲಿ ನೀವು ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು.

ಬೇರೆಯವರ ಖಾತೆಗೆ ಹಣ ವರ್ಗಾವಣೆ ಆದ ಕೂಡಲೇ ನೀವು ನಿಮ್ಮ ಹೋಮ್ ಬ್ರಾಂಚ್ ಗೆ ತಿಳಿಸಬೇಕು ನೀವು ತಪ್ಪಾಗಿ ಕಳುಹಿಸಿದ ಖಾತೆದಾರನ ಮತ್ತು ನಿಮ್ಮ ಖಾತೆಯು ಒಂದೇ ಬ್ಯಾಂಕಿಂಲ್ಲಿಯಾದರೆ ನಿಮ್ಮ ಪ್ರತಿಕ್ರಿಯೆ ಹೆಚ್ಚು ಸುಲಭವಾಗುತ್ತದೆ.ಮತ್ತು ಬ್ಯಾಂಕಿಂಗ್ ಅವಧಿಯ 1 -2 ದಿವಸದಲ್ಲಿ ನಿಮ್ಮ ಖಾತೆಗೆ ನಿಮ್ಮ ಹಣ ಬರಬಹುದು


Related Posts

Post a Comment