Report Abuse

Tags

Categories

Advertisement

Main Ad

Tags

Recent Posts

3/recent/post-list

Recent in Tech

3/Technology/post-list

Facebook

Business

Business/featured
DIGIVLOGS

ನಿಮ್ಮ ಬಳಿ ವಾಹನವಿದೆಯಾ? ಅಥವಾ ನೀವು ಚಾಲಕರಾ? ಹಾಗಾದರೆ ತಪ್ಪದೇ ಓದಿ..


ನಾವು ವಾಹನಗಳಲ್ಲಿ ಪ್ರಯಾಣಿಸುವಾಗ ವಾಹನಗಳು ಕೆಲವೊಂದು ಕಾರಣಗಳಿಂದ ರಸ್ತೆ ಮದ್ಯೆಗಳಲ್ಲಿ ನಮಗೆ ಕೈ ಕೊಡುತ್ತದೆ ಅದರಲ್ಲಿ ಒಂದು ಕಾರಣ ಟೈರ್ ಪಂಕ್ಚರ್ ಅದರಿಂದಾಗಿ  ಮುಂದಕ್ಕೆ ವಾಹನ ಚಲಾಯಿಸಲು ಅಸಮರ್ಥವಾಗುತ್ತದೆ. ವಾಹನಗಳು ಖಾಲಿ ಜಾಗದಲ್ಲಿ ನಿಂತಾಗ ಮೆಕಾನಿಕ್ ಶಾಪ್ ಹತ್ತಿರವಿರುವುದಿಲ್ಲ ಸಹಾಯಕ್ಕೆ ಯಾರೂ ಸಿಗುವುದಿಲ್ಲ. ನಾವು ತುರ್ತಾಗಿ ಎಲ್ಲಾದರೂ ಹೊರಟಿರುತ್ತೇವೆ ಏನು ಮಾಡುವುದೆಂದು ದಿಕ್ಕು ತೋಚುವುದಿಲ್ಲ ಅಂತಹ ಸಂದರ್ಭದಲ್ಲಿ ನಿಮಗೇನೆ ಪಂಕ್ಚರ್ ಹಾಕಬಹುದಾದ ಒಂದು Portable air compressor ಬಗ್ಗೆ ನಾನು ನಿಮಗೆ  ತಿಳಿಸುತೇನೆ ಇದು ಹಲವು ಸಂದರ್ಭಗಳಲ್ಲಿ ತುಂಬಾ ಉಪಯುಕ್ತ ತಂತ್ರಜ್ಞಾನವಾಗಿದೆ

Portable air compressor kit ನೊಂದಿಗೆ ವಾಹನಗಳಿಗಲ್ಲದೆ ಹಲವು ಸಾದನಗಳಿಗೂ ಉಪಯೋಗಿಸುವಂತ  ನಳಿಕೆಗಳು (nozzles) ಸಿಗುತ್ತದೆ. ಅದಲ್ಲದೆ air compresser ನಲ್ಲೇ ಒಂದು ಒತ್ತಡ (pressure) ಮೀಟರ್ ಕೂಡ ಇದೆ. Portable air compressor ಬಳಸಿ ನೀವು ಆಟಿಕೆಗಳಿಗೂ ಚಿಕ್ಕ ವಾಹನ ದೊಡ್ಡ ವಾಹನ ಇವೆಲ್ಲದಕ್ಕೂ ಇದನ್ನು ಉಪಯೋಗಿಸಲು ಸಾಧ್ಯವಾಗುತ್ತದೆ.

ಪ್ರತಿ ಟೈರ್‌ಗೆ ಅಗತ್ಯವಾದ ಒತ್ತಡಕ್ಕೆ ಅನುಗುಣವಾಗಿ ನಳಿಕೆ(nozzles)ಗಳನ್ನು ಬಳಸಬಹುದು. ವಾಹನದ ಸಿಗರೇಟ್  ಲ್ಯಾನ್ಪ್ ಸೋಕೆಟ್ (mobile charging socket) ಮೂಲಕ ಈ ಉಪಕರಣಕ್ಕೆ ಸಂಪರ್ಕ ನೀಡಬಹುದು. ನಳಿಕೆಯೊಂದಿಗೆ ಸಂಪರ್ಕಿಸಲು, ಅದನ್ನು ಪಂಪ್‌ನ ಒಳಭಾಗಕ್ಕೆ ಸೇರಿಸಿ, ಮತ್ತೆ ಒತ್ತಿರಿ.ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ನಳಿಕೆ(nozzles)ಗಳನ್ನು ಆಯ್ಕೆ ಮಾಡಬಹುದು.12 ವೋಲ್ಟ್ ಬ್ಯಾಟರಿಗೆ ಸಂಪರ್ಕಿಸಲು ಡಬಲ್ ವೈರ್ ಅಗತ್ಯವಿದೆ.ಏಕೆಂದರೆ ಆಗ ನೇರವಾಗಿ ಸಂಪರ್ಕಿಸಲು ಸಾಧ್ಯವಿಲ್ಲ.  ನಾಲ್ಕೂ ಮೂಲೆ(side)ಯ  ಟೈರ್ಗಳಿಗೆ ಸಂಪರ್ಕಿಸಲು ಜೊತೆಯಲ್ಲಿ 3 ಮೀಟರ್ ತಂತಿಯ (wire)ಅವಶ್ಯಕತೆಯಿದೆ. ತಂತಿ (wire)ಯನ್ನು ಪಾಸಿಟಿವ್ ಮತ್ತು ನೆಗೆಟಿವ್ಗಳಿಗೆ ಕನೆಕ್ಟ್ ಮಾಡಿ ನಳಿಕೆ(nozzles)ಯನ್ನು ಟೈರ್ಗಳಿಗೆ ಸಂಪರ್ಕಿಸುವ ಮೂಲಕ ಗಾಳಿಯನ್ನು ತುಂಬಿಸಬಹುದು.

ವಾಹನಗಳಲ್ಲಿ ಉಪಯೋಗಿಸುವಾಗ ಸಿಗರೇಟ್ ಸೋಕೆಟ್ಗೆ ಕನೆಕ್ಟ್ ಮಾಡಿ ಬಳಸಬಹುದು ನೀವು ಅದನ್ನು ಸಂಪರ್ಕಿಸಿದ ತಕ್ಷಣ ಅದು ಕಾರ್ಯನಿರ್ವಹಿಸುತ್ತದೆ.ಆದ್ದರಿಂದ ಯಾವುದೇ ವಿಶೇಷ ಸ್ವಿಚ್ ಅಗತ್ಯವಿಲ್ಲ.ನಂತರ ಅದನ್ನು ನೇರವಾಗಿ ಪಂಪ್‌ಗೆ ಸಂಪರ್ಕಪಡಿಸಿ.

ಟೈರ್ ನ ಒತ್ತಡಕ್ಕೆ ಅನುಗುಣವಾಗಿ nozil ಮೂಲಕ ಆಯ್ಕೆ ಮಾಡಬಹುದು.ಟಯರ್ ನ ಒತ್ತಡ (pressure) ವಾಹನದ ಗಾಜಿನಲ್ಲೊ ಇನ್ನೆಲ್ಲಾದರೂ ಬರೆದಿರಬಹುದು. ಆದ್ದರಿಂದ ಒತ್ತಡ ಮೀಟರ್‌ನಲ್ಲಿನ ಗಾಳಿಯ ಒತ್ತಡಕ್ಕೆ ವಿಶೇಷ ಗಮನ ಕೊಡಿ.  ಟೈರ್ ಪ್ರೆಶರ್ ಗೈಡ್‌ನೊಂದಿಗೆ ಪರಿಚಯವಿಲ್ಲದವರಿಗೆ, ನೀವು ಅದನ್ನು Google ಮೂಲಕ ಹುಡುಕಬಹುದು. ನೀವು ಈ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊ ನೋಡಿ.

Related Posts

Post a Comment